ಮರುಭೂಮಿಯಲ್ಲಿ ನೀರು ಸಿಕ್ಕಿದರೆ ಅಮೃತ ಸಿಕ್ಕಿದಂತೆ. ಇದೇ ಅನುಭವ ನನಗಾಯಿತು. ಒಳ್ಳೆಯ ಸಿನಿಮಾಗಳೇ ಇಲ್ಲದೇ ಮರುಭೂಮಿಯಂತೆ ಇದ್ದ ಸಿನೆಮಾ ಕ್ಷೇತ್ರದಲ್ಲಿ "ಒಂದಲ್ಲಾ ಎರಡಲ್ಲಾ" ನೀರಿದ್ದಂತೆ. ಈ ಸಿನೆಮಾ ಎಂಬ ಮರುಭೂಮಿಯಲ್ಲಿ ಕೆಲವು ನೀರಿರುವ ಒಯಾಸಿಸ್ ನಂತೆ ಒಳ್ಳೆಯ ಚಿತ್ರಗಳು ತುಂಬಾ ಕಡಿಮೆ. ಆದರೆ ಒಂದು ಒಯಾಸಿಸ್ ನಿಂದ ಇನ್ನೊಂದಕ್ಕೆ ಹಾನಿ ಕೂಡ ಆಗಬಾರದು. ಅವೆಲ್ಲ ವಿಷಯ ಪಕ್ಕಕೆ ಇಟ್ಟು... ಈ ಸಿನೆಮಾ ಬಗೆಗೆ ಒಂದೆರಡು ಮಾತಾಡೋಣ.
ಇವತ್ತು ಈ ಚಿತ್ರವನ್ನು ನೋಡಿ ಚಿತ್ರಮಂದಿರದಿಂದ ಹೊರ ಬರುವಾಗ ಎಷ್ಟೋ ವರುಷಗಳ ನಂತರ ಸಿನೆಮಾ ನೋಡಿದ ಖುಷಿ ಸಿಕ್ಕಿತು. ಮಗುವಿನ ಮುಗ್ಧತೆಯ ಸುತ್ತ ಎಷ್ಟು ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರೆ ನಾವು ಕೂಡ ಸಮೀರನಂತೆ ಮಗುವಾಗಿಬಿಡುತ್ತೇವೆ.
ಹೇಗೆ ಸಿನೆಮಾದಲ್ಲಿ ಕರು ಮತ್ತು ಹುಲಿ ನಡುವೆ ಸ್ನೇಹ ಹುಟ್ಟುತ್ತದೆಯೋ.. ಹಾಗೆಯೇ ಸಮಾಜದಲ್ಲಿ ಎಲ್ಲಾ ಪಂಗಡದವರು ಒಂದಾದರೆ ಮಗುವಿನಂತೆ ಮುಗ್ಧತೆಯ ಜೀವನವನ್ನು ನಡೆಸಬಹುದು.
ಹೇಗೆ ಸಿನೆಮಾದಲ್ಲಿ ಕರು ಮತ್ತು ಹುಲಿ ನಡುವೆ ಸ್ನೇಹ ಹುಟ್ಟುತ್ತದೆಯೋ.. ಹಾಗೆಯೇ ಸಮಾಜದಲ್ಲಿ ಎಲ್ಲಾ ಪಂಗಡದವರು ಒಂದಾದರೆ ಮಗುವಿನಂತೆ ಮುಗ್ಧತೆಯ ಜೀವನವನ್ನು ನಡೆಸಬಹುದು.
ಆಹಾ!!! ಆ ಕಥೆಗೆ ತಕ್ಕ ಹಾಡುಗಳು, ಹಾಸ್ಯ ಸನ್ನಿವೇಶಗಳು... ವಾಹ್!! ಈ ಚಿತ್ರವನ್ನು ಮಾಡಿದ ಜನರ ಶ್ರಮ "ಒಂದಲ್ಲಾ ಎರಡಲ್ಲಾ"... ಮಾಡಿದವರು ಒಬ್ಬರಲ್ಲಾ ಇಬ್ಬರಲ್ಲಾ ಹಲವಾರು.... ಇವರಿಗೆಲ್ಲಾ ಇಂತಹ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು....
ಎಲ್ರಿಗೂ ನಾನು ಹೇಳುವುದಿಷ್ಟೇ.... "ನಿಮ್ಮಲ್ಲಿ ಮಗುವಿನ ಮುಗ್ಧತೆಯನ್ನು ನೋಡಬೇಕೆ... ಅಥವಾ ಎಲ್ಲೋ ಕಳೆದು ಹೋಗಿರುವ ಮುಗ್ಧತೆಯನ್ನು ಮತ್ತೆ ಹುಡುಕಬೇಕೆ...?? ಹಾಗಾದರೆ ತಪ್ಪದೇ "ಒಂದಲ್ಲಾ ಎರಡಲ್ಲಾ" ಚಿತ್ರವನ್ನು ವೀಕ್ಷಿಸಿ.
ಇದು ಒಂದಲ್ಲಾ ಎರಡಲ್ಲಾ "ಐವತ್ತೆಂಟನೇ" ಬರಹ. ಈ ಬರಹವನ್ನು "ಒಂದಲ್ಲಾ ಎರಡಲ್ಲಾ" ಚಿತ್ರ ತಂಡಕ್ಕೆ ಅರ್ಪಿಸುತ್ತೇನೆ.
Comments
Post a Comment