ಓದುಗರೇ ಮಲೆನಾಡಿನಲ್ಲಿ ಏನ್ ಮಳೆ ಗೊತ್ತಾ, ಮನೆಯಿಂದ ಹೊರಗೆ ಕಾಲಿಡಲು ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ನಗರ ಪ್ರದೇಶದಲ್ಲಿಯೇ ಈ ಸ್ತಿತಿ ಆದರೆ ಇನ್ನು ಮಲೆನಾಡಿನ ಹಳ್ಳಿಯ ಪರಿಸ್ಥಿತಿ ಕೇಳಲೇಬೇಡಿ. ಇಂಜಿನಿಯರಿಂಗ್ ಮುಗಿದರೂ ಕೆಲಸಕ್ಕೆ ಕರೆಯಲಿಲ್ಲ ಎಂದರೆ ತುಂಬಾ ಹಿಂಸೆ ಆಗುತ್ತೆ. ಮನೇಲೆ ಸುಮ್ಮನಿರಲು ಆಗುವುದಿಲ್ಲ. ಹೀಗೆ ಒಂದು ತಿಂಗಳು ಕಳೆದರೂ, ಮುಂಜಾನೆ ಬೇಗ ಏಳುವುದು ರೂಢಿಯಾಗಲಿಲ್ಲ.
ಇವತ್ತು ನಾಗರಪಂಚಮಿ ಹಬ್ಬ ಬೇರೆ, ಮುಂಜಾನೆ ಬೇಗ ಏಳಲೇ ಬೇಕು. ಅದಿರಲಿ, ನಿಮಗೆಲ್ಲಾ ನೆನಪಿದೆಯೇ,..? ಸ್ವಾತಂತ್ರ ದಿನಾಚರಣೆಯ ದಿನ ಶಾಲೆಗೆ ಹೋಗಿ ಧ್ವಜಾರೋಹಣವನ್ನು ಮುಗಿಸಿ, ಸಿಹಿ ತಿಂದು ಮನೆಗೆ ತೆರಳುತ್ತಿದ್ದೆವು. ಆದರೆ ಏನ್ ಮಾಡ್ಲಿ ಮಾರಾಯರೆ, ನೆನ್ನೆ ರಾತ್ರಿ PUBG ಆಡ್ತಾ ಇದ್ದರಿಂದ ಬೆಳಿಗ್ಗೆ ಬೇಗ ಏಳಲು ಆಗಲಿಲ್ಲ.
ನಮ್ಮ ಮನೆಯ ಎದುರಿಗೆ ಇರುವ ಫ್ಯಾಕ್ಟರಿ ಜಾಗದಲ್ಲಿ ತಡ ರಾತ್ರಿ ದನವೊಂದು ಕರು ಹಾಕಿತು. ಇದೇ ಇವತ್ತಿನ ವಿಶೇಷ. ಇವತ್ತು ಹಬ್ಬ ಆದ್ದರಿಂದ ಎಲ್ಲರೂ ದನಗಳಿಗೆ ಏನಾದರೂ ತಿನ್ನಲು ತಂದಿದ್ದರು. ಆ ಕರು ನೋಡಲು ತುಂಬಾ ಚೆನ್ನಾಗಿತ್ತು. ವಿಶೇಷವೆಂದರೆ ಅಲ್ಲಿ ಅಕ್ಕ ಪಕ್ಕ ಇದ್ದ ದನಗಳು ಅದನ್ನು ನಾಯಿಗಳಿಂದ ರಕ್ಷಿಸುತ್ತಿದ್ದವು. ಹೀಗೆ ಮಧ್ಯಾಹ್ನದ ವೇಳೆಗೆ "ಅಂಬಾ...ಅಂಬಾ" ಅನ್ನೋ ಶಬ್ದ ಕ್ಷೀಣಿಸಿತು. ಹೊರಗೆ ಬಂದು ನೋಡಿದರೆ ಯಾವ ದನಗಳೂ ಇಲ್ಲ. ಆ ಕರು ಇವತ್ತೇ ಎದ್ದು ಸ್ವತಂತ್ರವಾಗಿ ಓಡಾಡಲು ಪ್ರಾರಂಭಿಸಿತ್ತು. ಆ ಕರು ಕುಣಿಯುವುದನ್ನು ನೋಡುವುದೇ ಚಂದ. ಇದೆ ಇವತ್ತಿನ ಸ್ವಾತಂತ್ರ ದಿನದ ವಿಶೇಷವಾಗಿತ್ತು.
ದನಗಳಲ್ಲಿ ಇರುವ ಆ ಮುಗ್ಧತೆಯ ಕಾಲಂಶವಾದರೂ ಮನುಷ್ಯನಲ್ಲಿ ಇದ್ದಿದರೆ ಚೆನ್ನಾಗಿರುತ್ತಿತ್ತು. ಮನುಷ್ಯನಲ್ಲಿ ಇರುವ ಕ್ರೌರ್ಯತೆಯೇ ದೇಶವನ್ನು ಹದಗೆಡಿಸುತ್ತದೆ. ಆದ್ದರಿಂದ ಇನ್ನಾದರೂ , ಈ ಸ್ವಾತಂತ್ರ ದಿನದಿಂದ ಮನುಷ್ಯತ್ವವನ್ನು ಬೆಳೆಸಿಕೊಂಡು ಮನುಷ್ಯರಾಗೋಣ. ಹೀಗೆ ಮಾಡಿದ್ದಲ್ಲಿ ದೇಶವೂ ಉದ್ಧಾರವಾಗುತ್ತದೆ.
ಎಲ್ಲಾ ಓದುಗರಿಗೂ ಸ್ವಾತಂತ್ರ ದಿನದ ಹಾಗು ನಾಗರಪಂಚಮಿ ಹಬ್ಬದ ಶುಭಾಶಯಗಳು.
Comments
Post a Comment