Skip to main content

ಗಾವೋ ವಿಶ್ವಸ್ಯ ಮಾತರಃ

   


    ಗಾವೋ ವಿಶ್ವಸ್ಯ ಮಾತರಃ ಎಂದರೆ ಈ ಜಗತ್ತಿಗೆ ಗೋವು ತಾಯಿ ಇದ್ದಂತೆ. ಸರಳ, ಮೂಕ ಮತ್ತು ಉಪಯುಕ್ತ ವಾದ ಜೀವಿ. ನಾವು ಎಷ್ಟು ಪ್ರೀತಿ ತೋರಿಸ್ತಿವೋ ಅದಕ್ಕೆ ಮೀರಿದ ಪ್ರೀತಿ ನಮಗೆ  ಕೊಡುತ್ತದೆ. ಅದರ ಹಾಲು ಎಷ್ಟು ಪ್ರಯೋಜನಕಾರಿ ಎಂದರೆ ಅದಿಲ್ಲದೆ ನಮ್ಮ ದಿನನಿತ್ಯ ಆಹಾರ ಪದ್ಧತಿ ಸಂಪೂರ್ಣವಾಗುವುದಿಲ್ಲ.
  ನಾವು ತಿನ್ನುವ ಎಷ್ಟೋ ಸಿಹಿ ಪದಾರ್ಥಗಳು ಹಾಲಿಲ್ಲದೆ ತಯಾರಾಗುವುದಿಲ್ಲ.
ಆದರೆ ಈ ಹಾಲನ್ನು ಉತ್ಪಾದನೆ ಮಾಡುವ ಡೈರಿ ಫಾರ್ಮ ಗಳ ಸಂಕಷ್ಟ ಯಾರಿಗೂ ತಿಳಿದಿಲ್ಲ . ಅವರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದರಲ್ಲಿ ಕಲಬರಿಕೆ ಮಾಡದೆ ಇದ್ದರೆ ಅವರಿಗೂ ಉಳಿಗಾಲವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

      ಮೊನ್ನೆ ತಾನೆ ಸಾಗರದ ಸಮೀಪದಲ್ಲಿರುವ ಒಂದು ಡೈರಿ ಫಾರ್ಮ್ ಗೆ ಭೇಟಿ ನೀಡಿದೆ. ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಬಿಚ್ಚಿಟ್ಟರು. ಅಲ್ಲಿ ಅಂದಾಜು 300 ದನಗಳು ಇದ್ದವು. ಸುಮಾರಷ್ಟು ಹೈಬ್ರಿಡ್ ತಳಿಗಳು. ಉಳಿದವು ಮಲ್ನಾಡ್ ಗಿಡ್ಡ. ಅವರಿಗೆ ಅಂದಾಜು 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದಿನಕ್ಕೆ ಒಂದು ದನದ ಮೇಲೆ ಅವರಿಗೆ 200 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. 300 ದನಕ್ಕೆ  ಅಂದಾಜು 60,000 ರೂಪಾಯಿಗಳು. ಪ್ರತಿ ಲೀಟರ್ ಗು ಅಬ್ಬಬ್ಬಾ ಅಂದರೆ 40 ರೂಪಾಯಿಗಳು ಎಂದು ಭಾವಿಸೋಣ. ಹಂಗಾದ್ರೆ ಅವರಿಗೆ ಬರೋದು  24000 ರೂಪಾಯಿಗಳು. ಇಲ್ಲೇ ಅವರಿಗೆ ಎಷ್ಟು ನಷ್ಟ ಆಗ್ತಿದೆ ಅಂತ ತಿಳಿಯಬಹುದು.

     ನಾವು ಹಾಲಿನ ದರ ಜಾಸ್ತಿ ಆಯಿತು ಅಂತ ಗೊತ್ತಾದ್ರೆ ಬಾಯಿ ಬಾಯ್ ಬಡ್ಕೋತೀವಿ. ಆದರೆ ಅವರಿಗೆ ಆಗುವ ನಷ್ಟ ಕೇಳುವರು ಯಾರು...?? ಹಸು ಹಾಲೇ ಬೇಕು ಎನ್ನುವರು ಕನಿಷ್ಠ ಪಕ್ಷ ಲೀಟರ್ ಗೆ 60 ರೂಪಾಯಿಗಳನ್ನು ಕೊಟ್ಟರೆ ಅವರಿಗೂ ತೃಪ್ತಿ.
ಇದಕ್ಕಾಗಿಯೇ ನಂದಿನಿ ಹಾಲಿನಲ್ಲೂ ಎಲ್ಲ ತರಹದ ಹಾಲು ಮಿಶ್ರಿತವಾಗಿರುತ್ತದೆ. ನಾವು ಅದನ್ನು ಹಸು ಹಾಲು ಎಂದು ಭಾವಿಸಿ ಕುಡಿಯಬೇಕಷ್ಟೇ.


   ಹಾಲಿನ ಫ್ಯಾಕ್ಟರಿಗಳಲ್ಲೂ ಭ್ರಷ್ಟಾಚಾರ ಕಮ್ಮಿ ಇಲ್ಲ. ಹಾಲು ಉತ್ಪಾದಕರ ಹಾಲನ್ನು ಸ್ವೀಕರಿಸಿ ಆಮೇಲೆ ಅದರಲ್ಲಿ ನಿಗದಿ ಪಡಿಸಿರುವಷ್ಟು ಫ್ಯಾಟ್ ಇಲ್ಲ ಅಂತ  ಹೇಳಿ ಹಣವನ್ನು ಕೊಡುವುದಿಲ್ಲ. ಆದರೆ ಹಾಲನ್ನು ಬಳಸುತ್ತಾರೆ. ಒಮ್ಮೆ ಯೋಚ್ನೆ ಮಾಡಿ 600 ಲೀಟರ್ ಅನ್ನು ಬೇಡ ಅಂತ ಹೇಳಿ ಹಣ ಕೊಟ್ಟಿಲ್ಲ ಅಂದರೆ ಅವರಿಗೆ ಆಗುವ ನಷ್ಟ ಎಷ್ಟು??!!!
 
       ಗೋವಿಗೆ ಪ್ರಾಚೀನ ಹಿಂದೂ ಧರ್ಮದಲ್ಲಿ ಪೂಜ್ಯ ಸ್ಥಾನವನ್ನು ಕಲ್ಪಿಸಿದ್ದಾರೆ. ಏಕೆಂದರೆ ಅದು ಎಷ್ಟು ಪ್ರೌಯೋಜನಕರವಾದರು ಅದು ನಮ್ಮಿಂದ ಏನು ಕೇಳುವುದಿಲ್ಲ. ಮೊದಲೇ ಹೇಳಿದಂತೆ ಸಾಧುಪ್ರಾಣಿ.
 
    ದೇಶದಲ್ಲಿ  ಅಕ್ರಮ ಕಸಾಯಿಖಾನೆ ನಿರ್ಮೂಲನೆ ಆದರೆ ಮಾತ್ರ ಸಾಕಾಗುವುದಿಲ್ಲ. ರಸ್ತೆಯಲ್ಲಿ ನಾವು ಎಷ್ಟೋ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡ್ತೀವಿ. ಅದನ್ನು ನಾವು ನಿಲ್ಲಿಸಬೇಕು. ಅವನ್ನೇ ಗೋವುಗಳು ತಿನ್ನೋದು ಅದಾದಮೇಲೆ ಸಾಯುವುದು. ನಾವು ಸಿಕ್ಕಿದೆಲ್ಲ ರಸ್ತೆಗೆ ಹಾಕದೆ ಹೋದರೆ ದೇಶವು ಸ್ವಚ್ಛವಾಗಿ ಇರುತ್ತದೆ. ಇನ್ನೊಂದು ಕಡೆಯಲ್ಲಿ ಗೋವುಗಳು ಆ ಕಸವನ್ನು ತಿನ್ನುವುದಿಲ್ಲ.

       ಏನೇ ಆಗಲಿ ಗೋವು ಒಂದೇ ಅಲ್ಲ, ಎಲ್ಲಾ ಪ್ರಾಣಿಗಳನ್ನು ರಕ್ಷಿಸೋಣ, ಪರಿಸರವನ್ನು ರಕ್ಷಿಸೋಣ.

ಪರಿಸರವಿದ್ದರೆ ನಾವು , ನಾವಿದ್ದರೆ ಪರಿಸರವಲ್ಲ.

Comments

Post a Comment

Popular posts from this blog

ಮನೆ-ಮನಗಳಿಂದ ಮರೆಯಾದ ಗುಬ್ಬಚ್ಚಿ

          ಅ ದೊಂದು ಕಾಲವಿತ್ತು, ಮುಂಜಾನೆ ಎದ್ದು ಹೊರಗೆ ಹೋದರೆ ಗುಬ್ಬಚ್ಚಿಯ ಚಿಲಿಪಿಲಿ ಕಲರವವನ್ನು ಕೇಳುತ್ತಿದ್ದೆವು. ಸಂಜೆಯಾದರೆ, ಗುಬ್ಬಚ್ಚಿ ಮರಳಿ ಗೂಡಿಗೆ ಸೇರುವುದನ್ನು ಕೂಡ ನೋಡಬಹುದಿತ್ತು. ಅವು ತಮ್ಮ ಲೋಕದಲ್ಲೇ ಹಾರಾಡುತ್ತ ಕುಣಿಯುತ್ತ ಸಂತೋಷದಿಂದ ಇದ್ದವು. ಅವುಗಳ ಸಂತೋಷವೇ ನಮ್ಮ ಸಂತೋಷವಾಗಿತ್ತು. ಪರಿಸರವನ್ನು ನೋಡಿ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ! ಅದರ ಜೊತೆಗೆ ಹಕ್ಕಿಗಳ ಕಲರವವೂ ಸೇರಿದರೆ ಮತ್ತಷ್ಟು ಖುಷಿ.         ಅದಕ್ಕೆ ವಿಶಾಲವಾದ ಜಾಗ ಬೇಡ, ಒಂದು ಸಣ್ಣ ಮರವಿದ್ದರೆ ಸಾಕು, ಗುಬ್ಬಚಿಯೂ ಖುಷಿ ಖುಷಿಯಾಗಿ ಇರುತ್ತವೆ. ಹಾಗೆ ನೋಡಿದರೆ ಈ ಬುದ್ಧಿ ಜೀವಿಗಳ ಆಸೆಯಿಂದಾಗಿ ಇವರ ಪುಟ್ಟ ಪರಿವಾರಕ್ಕೆ ಧಕ್ಕೆ ಉಂಟಾಯಿತು ಎಂದರೆ ತಪ್ಪಲ್ಲ. ಮನುಷ್ಯರು ಚಿನ್ನ, ಆಸ್ತಿ ವಿಚಾರಕ್ಕೆ ಅದೆಷ್ಟು ಕಿತ್ತಾಡುತ್ತಾರೆ. ಆಸ್ತಿಯ ವಿಚಾರದಲ್ಲಂತೂ ಅವರಿಗೆ ಸಂಬಂಧಗಳ ಮಹತ್ವವೇ ತಿಳಿಯುವುದಿಲ್ಲ. ಸ್ವಂತ ಪೋಷಕರನ್ನೇ ಮನೆಯಿಂದ ಹೊರ ಹಾಕುವ ಮಕ್ಕಳಿರುವಾಗ, ಈ ಬುದ್ಧಿ ಜೀವಿಗಳಿಗೆ ನಿಜಕ್ಕೂ ಬುದ್ಧಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.          ಅದೆಲ್ಲ ಇರಲಿ, ಇಂತಹ ಯಾವುದೇ ಜಂಜಾಟವಿಲ್ಲದ ಬದುಕನ್ನು ನಡೆಸುತ್ತಿರುವ ಗುಬ್ಬಚಿಯ ವಿಚಾರದ್ಲಲ್ಲಿ ಮನುಷ್ಯನು ಘೋರ ತಪ್ಪನ್ನು ಮಾಡುತ್ತಿದ್ದಾನೆ. ಇದಕ್ಕೆ ಈ ಬ್ಲಾಗಿನ ಜೊತೆ ಹಾಕಿರ...

ನೆನಪಿನಂಗಳ

             ಓ ದುಗರೇ, ನಾನು ಚಿಕ್ಕಮಗಳೂರಿನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಬಗ್ಗೆ ಮಾತಾಡಬೇಕೆಂಬುದು ಬಹು ಸಮಯದ ಇಚ್ಛೆ. ಸುತ್ತ ಮುತ್ತಲೂ ಎಲ್ಲೆಲ್ಲೂ ಹಸಿರು , ಗುಡ್ಡ ಬೆಟ್ಟಗಳ ಮಧ್ಯೆ ಇರುವ ಚಿಕ್ಕಮಗಳೂರು ಮಲೆನಾಡಿನ ಹೃದಯ ಎಂದೇ ಹೇಳಬಹುದು. ಇಂತಹ ವಾತಾವರಣದ ಮಧ್ಯೆ ಇರುವ ನಮ್ಮ ವಿದ್ಯಾರ್ಥಿ ನಿಲಯ ನಿಜಕ್ಕೂ ಅಧ್ಭುತ ಎಂದೇ ಹೇಳಬಹುದು.        ಈ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಂದಾಗಿ ಈ ನಿಲಯ ಅಧ್ಭುತ ಎನ್ನಬಹುದು. ಚಿಕ್ಕಮಗಳೂರಿನಲ್ಲಿ ನನಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಮೊದಲ ಬಾರಿಗೆ ನಾನು ಚಿಕ್ಕಮಗಳೂರಿಗೆ ಬಂದಾಗ ವಸತಿಯ ಬಗೆಗೆ ತಲೆಕೆಡಿಸಿಕೊಂಡಿದ್ದೆ. ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿ ನಿಲಯದಲ್ಲಿ ರೂಮ್ ಕೇಳಿದಾಗ, "ನೀವು ಬ್ರಾಹ್ಮಣರಲ್ವಾ, ನೀವು ಕಾಲೇಜಿನಿಂದ ಹೀಗೆ ಎದುರಿನ ರಸ್ತೆಯಲ್ಲಿ ಹೋದರೆ ನಿಮಗಾಗಿ, ನಿಮ್ಮ ಸಮುದಾಯದವರಿಗಾಗಿ ಕಟ್ಟಿಸಿದ ವಿದ್ಯಾರ್ಥಿ ನಿಲಯ ಇದೆ" ಅಂತ ಹೇಳಿ, ಅಲ್ಲಿಗೆ ಕಳುಹಿಸಿದರು.         ವಿದ್ಯಾರ್ಥಿ ನಿಲಯದ ವಾತಾವರಣ ತುಂಬಾ ಚೆನ್ನಾಗಿತ್ತು. ಸುತ್ತಲೂ ಕಟ್ಟಡ, ಮಧ್ಯದಲ್ಲಿ ಬಗೆ ಬಗೆಯ ಹೂವುಳ್ಳ ಗಿಡಗಳು ಮತ್ತು ಶೃಂಗೇರಿ ಸ್ವಾಮಿಗಳು ಸ್ಥಾಪಿಸಿದ ವಿದ್ಯಾ ಗಣಪತಿ ಯ ಗುಡಿ. ಹುಡುಗರೆಲ್ಲರೂ ತುಂಬಾ...