ನಾವು ಚಿಕ್ಕವರಿದ್ದಾಗ ಪ್ರತೀ ದಿನವೂ ಶಾಲೆಗೆ ಹೋಗುತ್ತಿದ್ದೆವು. ಬಂಕ್ ಅನ್ನೋ ಪದವು ನಮ್ಮ ಕಿವಿಗೆ ಬೀಳುತ್ತಿರಲ್ಲಿಲ್ಲ. ಹಾಗೆ ಹೇಳೋ ಬದಲು ಆತರ ಬಂಕ್ ಹಾಕೋ ಶೋಕಿ ಇರ್ಲಿಲ್ಲ ಅಂತ ಹೇಳಬಹುದು.
ಎಲ್ಲರ ಮನೆ ಅಲ್ಲದಿದ್ದರೂ, ತುಂಬಾ ಮನೆಗಳಲ್ಲಿ ದಿನಾ ಸಂಜೆ ಮಕ್ಕಳು ಆಟವಾಡುತ್ತಿದ್ದರು. ಅದರಲ್ಲಿಯೂ ಮುಖ್ಯವಾಗಿ ಕ್ರಿಕೆಟ್ ಅನ್ನೋದು ಬಹು ಮುಖ್ಯ ಆಟ. ಕ್ರಿಕೆಟ್ ಆಡಬೇಕಾದ್ರೆ ಯುದ್ಧಕ್ಕೆ ನಿಂತ ಅನುಭವ. ಅದರಲ್ಲಿ ಜಗಳ ಶುರುವಾದರೆ ಬ್ಯಾಟ್ ಮತ್ತೆ ವಿಕೆಟ್ ಗಳೇ ಆಯುಧಗಳು. ಬ್ರಿಟೀಷರು ಭಾರತ ಬಿಟ್ಟರು ಕ್ರಿಕೆಟ್ ನಮ್ಮನ್ನ ಬಿಟ್ಟಿಲ್ಲ ಅಂತ ಹೇಳಬಹುದು.
ನಾವು ಆಡುವ ಕ್ರಿಕೆಟ್ ಅಲ್ಲಿ ನಮ್ಮದೇ ಆದ ಒಂದಿಷ್ಟು ನಿಯಮಗಳು ಇರುತ್ತಿತ್ತು. ಅಕ್ಕ ಪಕ್ಕದ ಮನೆಯ ಹುಡುಗರೆಲ್ಲ ಸೇರಿ ಕ್ರಿಕೆಟ್ ಆಡುವ ಮಜಾನೆ ಬೇರೆ.
ನಾವು ಆಡುವ ಕ್ರಿಕೆಟ್ ಅಲ್ಲಿ ನಮ್ಮದೇ ಆದ ಒಂದಿಷ್ಟು ನಿಯಮಗಳು ಇರುತ್ತಿತ್ತು. ಅಕ್ಕ ಪಕ್ಕದ ಮನೆಯ ಹುಡುಗರೆಲ್ಲ ಸೇರಿ ಕ್ರಿಕೆಟ್ ಆಡುವ ಮಜಾನೆ ಬೇರೆ.
ರವಿವಾರ ಅಥವಾ ರಜಾದಿನಗಳಲ್ಲಿ ಬೆಳಿಗ್ಗೆ ತಿಂಡಿ ತಿಂದು ಕ್ರಿಕೆಟ್ ಆಡೋಕೆ ಹೋದರೆ ಮುಗೀತು, ಇನ್ನು ಸಂಜೆ ಮನೆಗೆ ಬರೋದು ಅಂತ ಎಲ್ಲಾ ತಂದೆ ತಾಯಂದಿರಿಗೂ ಗೊತ್ತಿರೋ ವಿಚಾರ. ಅದರ ಮಧ್ಯವೂ ಸ್ವಲ್ಪ ಮಂದಿ ಪೋಷಕರು ಊಟದ ಸಮಯದಲ್ಲಿ ತಮ್ಮ ಮಕ್ಕಳನ್ನು ಒತ್ತಾಯದಿಂದ ಕರೆತಂದು, ಊಟ ಮುಗಿಯೋದೇ ತಡ, ಅದೇ ವೇಗದಲ್ಲಿ ಮಕ್ಕಳು ಮತ್ತೆ ಕ್ರಿಕೆಟ್ ಆಡೋಕೆ ಹೋಗುತ್ತಿದ್ದರು.
ಕೆಲವು ಕ್ಷಣಗಳನ್ನು ನೆನಪಿಸಿಕೊಂಡು ಈಗಲೂ ನಗುತ್ತೇವೆ. ಬಾಲ್ಯವೇ ಹಾಗೆ. ಅದರಲ್ಲೂ ಸಂಜೆ ಕ್ರಿಕೆಟ್ ಆಡುವ "ಪರಂಪರೆ" ಇಂದ ಬಂದವರಿಗೆ ಇದರ ಮಜಾ ಗೊತ್ತಿದ್ದೆ ಇರುತ್ತೆ.
ಇಂತಹ ಪರಂಪರೆ ಇಂದ ಬಂದವರಿಗೆ ಅವರ ಬಾಲ್ಯವನ್ನು ಮೆಲಕು ಹಾಕುವ ಒಂದು ಸಣ್ಣ ಪ್ರಯತ್ನ ಇದಾಗಿದೆ.
ಇಂತಹ ಪರಂಪರೆ ಇಂದ ಬಂದವರಿಗೆ ಅವರ ಬಾಲ್ಯವನ್ನು ಮೆಲಕು ಹಾಕುವ ಒಂದು ಸಣ್ಣ ಪ್ರಯತ್ನ ಇದಾಗಿದೆ.
Comments
Post a Comment