ನಾವು ಯಾವುದೇ ಧರ್ಮ, ಜಾತಿ, ಪಂಥ, ಪಂಗಡಗಳಿಗೆ ಸೇರಿದರೂ, ಹುಟ್ಟಿ ಬೆಳೆದ ಊರಿನ ಕಡೆ ಪ್ರೀತಿ ಇದ್ದೆ ಇರುತ್ತೆ. ಊರಿನ ವಿಷಯದಲ್ಲಿ ನಾವು ಯಾವ ಜಾತಿ ಆಗಲಿ , ಪಂಗಡ ಆಗಲಿ ನೋಡುವುದಿಲ್ಲ . ಅದೇ ಊರಿನ ಮೇಲೆ ಇರುವ ಅಭಿಮಾನ.
ಈ ಅಭಿಮಾನ ಧರ್ಮ, ನಾವು ಆಡುವ ಭಾಷೆ ಎಲ್ಲದರ ಮೇಲು ಇರುತ್ತೆ. ಆದರೆ ಊರಿನ ಮೇಲೆ ಇರುವ ಅಭಿಮಾನವೇ ಬೇರೆ. ನಾವು ಬೇರೆ ನಗರಕ್ಕೆ ಆಗಲಿ, ಊರಿಗೆ ಆಗಲಿ, ಒಟ್ಟಿನಲ್ಲಿ ಬೇರೆ ಕಡೆಗೆ ಹೋದಾಗ ನಮ್ಮ ಊರಿನವರು ಸಿಕ್ಕಾಗ ತುಂಬಾನೇ ಸಂತೋಷ ಆಗುತ್ತದೆ. ಅದೇ ರೀತಿ ನೀವು ಈ ರಾಜ್ಯ ಬಿಟ್ಟು ಬೇರೆ ಕಡೆಗೆ ಹೋಗಿ ಕರ್ನಾಟಕದವರು ಸಿಕ್ಕಾಗ, ಕನ್ನಡ ಮಾತಾಡೋರು ಸಿಕ್ಕಾಗ ಆಗೋ ಸಂತಸ ಹೇಳೋಕೆ ಆಗುವುದಿಲ್ಲ.
ಅದೇ ತರಹ, ದೇಶ ಬಿಟ್ಟು ಹೋದಾಗ ಭಾರತದವರು ಅಂತ , ಹೀಗೆ ನಮ್ಮ ಹಿಂದೆ ನಮಗೆ ಗೊತ್ತಿಲ್ಲದೆ ಒಂದು ಗುರುತು ಯಾವಾಗಲೂ ಇರುತ್ತದೆ.
ಹೀಗೆ ಮಲೆನಾಡಿನ ಮಡಿಲಲ್ಲಿ, ಸಮುದ್ರವಿಲ್ಲದಿದ್ದರು ಪ್ರೀತಿಯ ಅಲೆಗಳನ್ನು ತುಂಬಿರುವ "ಸಾಗರ"ದವನು ನಾನು.
ಹೀಗೆ ಮಲೆನಾಡಿನ ಮಡಿಲಲ್ಲಿ, ಸಮುದ್ರವಿಲ್ಲದಿದ್ದರು ಪ್ರೀತಿಯ ಅಲೆಗಳನ್ನು ತುಂಬಿರುವ "ಸಾಗರ"ದವನು ನಾನು.
ಒಂದು ತುದಿಯಲ್ಲಿ ಜೋಗ ಜಲಪಾತ , ಇನ್ನೊಂದೆಡೆ ಸಿಗಂದೂರು ಚೌಡೇಶ್ವರಿ ಅಮ್ಮನ ಆಶೀರ್ವಾದ, ಮತ್ತೊಂದೆಡೆ ಶ್ರೀಧರ ಸ್ವಾಮಿಗಳ ಆಶೀರ್ವಾದ, ಹೀಗೆ ಇನ್ನು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮನಮೋಹಕ ಸಾಗರ ಎಲ್ಲರನ್ನು ಆಕರ್ಷಿಸುತ್ತದೆ.
ನಮಗೆ ಸಾಗರದವರು ಎಲ್ಲೇ ಸಿಕ್ಕರು ಖುಷಿನೆ. ಹೀಗೆ ಎಲ್ಲರಿಗೂ 'ಊರಾ'ಭಿಮಾನ ಇರುತ್ತದೆ.
ಆದರೆ ಇದೇ ಅಭಿಮಾನವನ್ನು ಜಗಳವಾಡೋಕೆ ಉಪಿಯೋಗಿಸೋದು ಸರಿ ಅಲ್ಲ.
ಮೊದಲಿಗೆ ದೇಶ, ಆಮೇಲೆ ನಿಮ್ಮ ಊರು!!!
Nin heg baritane irtiyala yavag time sigate ninge
ReplyDeleteFor interested things, we need not seek time. :)
ReplyDeleteNice Sumanth
ReplyDeleteThank you sharath anna!! :)
Delete