Skip to main content

ಮನೆ-ಮನಗಳಿಂದ ಮರೆಯಾದ ಗುಬ್ಬಚ್ಚಿ



          ದೊಂದು ಕಾಲವಿತ್ತು, ಮುಂಜಾನೆ ಎದ್ದು ಹೊರಗೆ ಹೋದರೆ ಗುಬ್ಬಚ್ಚಿಯ ಚಿಲಿಪಿಲಿ ಕಲರವವನ್ನು ಕೇಳುತ್ತಿದ್ದೆವು. ಸಂಜೆಯಾದರೆ, ಗುಬ್ಬಚ್ಚಿ ಮರಳಿ ಗೂಡಿಗೆ ಸೇರುವುದನ್ನು ಕೂಡ ನೋಡಬಹುದಿತ್ತು. ಅವು ತಮ್ಮ ಲೋಕದಲ್ಲೇ ಹಾರಾಡುತ್ತ ಕುಣಿಯುತ್ತ ಸಂತೋಷದಿಂದ ಇದ್ದವು. ಅವುಗಳ ಸಂತೋಷವೇ ನಮ್ಮ ಸಂತೋಷವಾಗಿತ್ತು. ಪರಿಸರವನ್ನು ನೋಡಿ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ! ಅದರ ಜೊತೆಗೆ ಹಕ್ಕಿಗಳ ಕಲರವವೂ ಸೇರಿದರೆ ಮತ್ತಷ್ಟು ಖುಷಿ.

        ಅದಕ್ಕೆ ವಿಶಾಲವಾದ ಜಾಗ ಬೇಡ, ಒಂದು ಸಣ್ಣ ಮರವಿದ್ದರೆ ಸಾಕು, ಗುಬ್ಬಚಿಯೂ ಖುಷಿ ಖುಷಿಯಾಗಿ ಇರುತ್ತವೆ. ಹಾಗೆ ನೋಡಿದರೆ ಈ ಬುದ್ಧಿ ಜೀವಿಗಳ ಆಸೆಯಿಂದಾಗಿ ಇವರ ಪುಟ್ಟ ಪರಿವಾರಕ್ಕೆ ಧಕ್ಕೆ ಉಂಟಾಯಿತು ಎಂದರೆ ತಪ್ಪಲ್ಲ. ಮನುಷ್ಯರು ಚಿನ್ನ, ಆಸ್ತಿ ವಿಚಾರಕ್ಕೆ ಅದೆಷ್ಟು ಕಿತ್ತಾಡುತ್ತಾರೆ. ಆಸ್ತಿಯ ವಿಚಾರದಲ್ಲಂತೂ ಅವರಿಗೆ ಸಂಬಂಧಗಳ ಮಹತ್ವವೇ ತಿಳಿಯುವುದಿಲ್ಲ. ಸ್ವಂತ ಪೋಷಕರನ್ನೇ ಮನೆಯಿಂದ ಹೊರ ಹಾಕುವ ಮಕ್ಕಳಿರುವಾಗ, ಈ ಬುದ್ಧಿ ಜೀವಿಗಳಿಗೆ ನಿಜಕ್ಕೂ ಬುದ್ಧಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. 

        ಅದೆಲ್ಲ ಇರಲಿ, ಇಂತಹ ಯಾವುದೇ ಜಂಜಾಟವಿಲ್ಲದ ಬದುಕನ್ನು ನಡೆಸುತ್ತಿರುವ ಗುಬ್ಬಚಿಯ ವಿಚಾರದ್ಲಲ್ಲಿ ಮನುಷ್ಯನು ಘೋರ ತಪ್ಪನ್ನು ಮಾಡುತ್ತಿದ್ದಾನೆ. ಇದಕ್ಕೆ ಈ ಬ್ಲಾಗಿನ ಜೊತೆ ಹಾಕಿರುವ ಗೂಡನ್ನು ಗಮನಿಸಿ. ಇಂತಹ ಎಷ್ಟೋ ಗೂಡುಗಳು ಖಾಲಿಯಾಗಿವೆ. ಗುಬ್ಬಚ್ಚಿಯು ದಿನೇದಿನೇ ನಮ್ಮಿಂದ ದೂರವಾಗುತ್ತಿದೆ. ಮನುಷ್ಯನು ಸೃಷ್ಟಿಸಿದ ಎಷ್ಟೋ ಯಂತ್ರೋಪಕರಣಗಳಿಂದ ಹೊರ ಹೋಗುವ ಕಿರಣಗಳಿಂದಾಗಿ ಪಕ್ಷಿಗಳು ತುಂಬಾ ಒದ್ದಾಡುವಂತೆ ಮಾಡಿದೆ. 

        ನನಗಿನ್ನೂ ನೆನಪಿದೆ, ಸುಮಾರು ೧೦ ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಅಜ್ಜಿ ಬಿಸಿಲಿಗೆ ಒಣ ಹಾಕಿರುವ ಹಪ್ಪಳವನ್ನು ಹಕ್ಕಿಗಳು ಬಂದು ತಿನ್ನುತ್ತಿದ್ದವು. ಅದನ್ನು ತಡೆಯಲು ಕನ್ನಡಿಯನ್ನು ಇಡುತ್ತಿದ್ದರು. ಹೀಗೆ ಅವುಗಳಿಗೂ ನನ್ನ ಅಜ್ಜಿ ಮಾಡಿದ ಹಪ್ಪಳವನ್ನು ಸವಿಯುವ ಯೋಗವಿತ್ತು. ಈಗ ಹಪ್ಪಳವನ್ನು ಒಣ ಹಾಕಿದರೆ ಯಾವ ಹಕ್ಕಿಯೂ ಬರುವುದಿಲ್ಲ. ಏಕೆಂದರೆ ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಗುಬ್ಬಚ್ಚಿ ಒಂದೇ ಅಲ್ಲ, ಅದರ ಹೊರತಾಗಿ ಎಷ್ಟೋ ಹಕ್ಕಿಗಳು ಕಾಣೆಯಾಗಿವೆ. ಪಿಂಡ ತಿನ್ನಲು ಕೂಡ ಕಾಗೆಗಳಿಲ್ಲದಂತಾಗಿದೆ. ಆ ದೃಷ್ಟಿಯಿಂದಲ್ಲ ಹೇಳಿದ್ದು, ನನ್ನ ಕಳಕಳಿಯು ಹಕ್ಕಿಗಳ ಮೇಲೆಯೇ ಹೊರತು ಪಿಂಡದಮೇಲಲ್ಲ. 😅

        ಹೀಗೆ ಗುಬ್ಬಚ್ಚಿಯು ಮನೆಯನ್ನು [ಗೂಡು] ತೊರೆಯುವುದರ ಜೊತೆಗೆ, ನಮ್ಮ ಮನದಿಂದಲೂ ಮರೆಯಾಗಿದೆ. ಏಕೆಂದರೆ ಇಂದಿನ ಮಕ್ಕಳು ಗುಬ್ಬಚ್ಚಿಯನ್ನೂಕೂಡ ಪಕ್ಷಿಧಾಮಗಳಲ್ಲಿ ನೋಡುವಂತಾಗಿದೆ. 


Comments

Post a Comment

Popular posts from this blog

ಗಾವೋ ವಿಶ್ವಸ್ಯ ಮಾತರಃ

        ಗಾವೋ ವಿಶ್ವಸ್ಯ ಮಾತರಃ ಎಂದರೆ ಈ ಜಗತ್ತಿಗೆ ಗೋವು ತಾಯಿ ಇದ್ದಂತೆ. ಸರಳ, ಮೂಕ ಮತ್ತು ಉಪಯುಕ್ತ ವಾದ ಜೀವಿ. ನಾವು ಎಷ್ಟು ಪ್ರೀತಿ ತೋರಿಸ್ತಿವೋ ಅದಕ್ಕೆ ಮೀರಿದ ಪ್ರೀತಿ ನಮಗೆ  ಕೊಡುತ್ತದೆ. ಅದರ ಹಾಲು ಎಷ್ಟು ಪ್ರಯೋಜನಕಾರಿ ಎಂದರೆ ಅದಿಲ್ಲದೆ ನಮ್ಮ ದಿನನಿತ್ಯ ಆಹಾರ ಪದ್ಧತಿ ಸಂಪೂರ್ಣವಾಗುವುದಿಲ್ಲ.   ನಾವು ತಿನ್ನುವ ಎಷ್ಟೋ ಸಿಹಿ ಪದಾರ್ಥಗಳು ಹಾಲಿಲ್ಲದೆ ತಯಾರಾಗುವುದಿಲ್ಲ. ಆದರೆ ಈ ಹಾಲನ್ನು ಉತ್ಪಾದನೆ ಮಾಡುವ ಡೈರಿ ಫಾರ್ಮ ಗಳ ಸಂಕಷ್ಟ ಯಾರಿಗೂ ತಿಳಿದಿಲ್ಲ . ಅವರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದರಲ್ಲಿ ಕಲಬರಿಕೆ ಮಾಡದೆ ಇದ್ದರೆ ಅವರಿಗೂ ಉಳಿಗಾಲವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.       ಮೊನ್ನೆ ತಾನೆ ಸಾಗರದ ಸಮೀಪದಲ್ಲಿರುವ ಒಂದು ಡೈರಿ ಫಾರ್ಮ್ ಗೆ ಭೇಟಿ ನೀಡಿದೆ. ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಬಿಚ್ಚಿಟ್ಟರು. ಅಲ್ಲಿ ಅಂದಾಜು 300 ದನಗಳು ಇದ್ದವು. ಸುಮಾರಷ್ಟು ಹೈಬ್ರಿಡ್ ತಳಿಗಳು. ಉಳಿದವು ಮಲ್ನಾಡ್ ಗಿಡ್ಡ. ಅವರಿಗೆ ಅಂದಾಜು 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದಿನಕ್ಕೆ ಒಂದು ದನದ ಮೇಲೆ ಅವರಿಗೆ 200 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. 300 ದನಕ್ಕೆ  ಅಂದಾಜು 60,000 ರೂಪಾಯಿಗಳು. ಪ್ರತಿ ಲೀಟರ್ ಗು ಅಬ್ಬಬ್ಬಾ ಅಂದರೆ 40 ರೂಪಾಯಿಗಳು ಎಂದು ಭಾವಿಸೋಣ. ಹಂಗಾದ್ರೆ ಅವರಿಗೆ ಬರೋದು  24000 ರ...

ನೆನಪಿನಂಗಳ

             ಓ ದುಗರೇ, ನಾನು ಚಿಕ್ಕಮಗಳೂರಿನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಬಗ್ಗೆ ಮಾತಾಡಬೇಕೆಂಬುದು ಬಹು ಸಮಯದ ಇಚ್ಛೆ. ಸುತ್ತ ಮುತ್ತಲೂ ಎಲ್ಲೆಲ್ಲೂ ಹಸಿರು , ಗುಡ್ಡ ಬೆಟ್ಟಗಳ ಮಧ್ಯೆ ಇರುವ ಚಿಕ್ಕಮಗಳೂರು ಮಲೆನಾಡಿನ ಹೃದಯ ಎಂದೇ ಹೇಳಬಹುದು. ಇಂತಹ ವಾತಾವರಣದ ಮಧ್ಯೆ ಇರುವ ನಮ್ಮ ವಿದ್ಯಾರ್ಥಿ ನಿಲಯ ನಿಜಕ್ಕೂ ಅಧ್ಭುತ ಎಂದೇ ಹೇಳಬಹುದು.        ಈ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಂದಾಗಿ ಈ ನಿಲಯ ಅಧ್ಭುತ ಎನ್ನಬಹುದು. ಚಿಕ್ಕಮಗಳೂರಿನಲ್ಲಿ ನನಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಮೊದಲ ಬಾರಿಗೆ ನಾನು ಚಿಕ್ಕಮಗಳೂರಿಗೆ ಬಂದಾಗ ವಸತಿಯ ಬಗೆಗೆ ತಲೆಕೆಡಿಸಿಕೊಂಡಿದ್ದೆ. ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿ ನಿಲಯದಲ್ಲಿ ರೂಮ್ ಕೇಳಿದಾಗ, "ನೀವು ಬ್ರಾಹ್ಮಣರಲ್ವಾ, ನೀವು ಕಾಲೇಜಿನಿಂದ ಹೀಗೆ ಎದುರಿನ ರಸ್ತೆಯಲ್ಲಿ ಹೋದರೆ ನಿಮಗಾಗಿ, ನಿಮ್ಮ ಸಮುದಾಯದವರಿಗಾಗಿ ಕಟ್ಟಿಸಿದ ವಿದ್ಯಾರ್ಥಿ ನಿಲಯ ಇದೆ" ಅಂತ ಹೇಳಿ, ಅಲ್ಲಿಗೆ ಕಳುಹಿಸಿದರು.         ವಿದ್ಯಾರ್ಥಿ ನಿಲಯದ ವಾತಾವರಣ ತುಂಬಾ ಚೆನ್ನಾಗಿತ್ತು. ಸುತ್ತಲೂ ಕಟ್ಟಡ, ಮಧ್ಯದಲ್ಲಿ ಬಗೆ ಬಗೆಯ ಹೂವುಳ್ಳ ಗಿಡಗಳು ಮತ್ತು ಶೃಂಗೇರಿ ಸ್ವಾಮಿಗಳು ಸ್ಥಾಪಿಸಿದ ವಿದ್ಯಾ ಗಣಪತಿ ಯ ಗುಡಿ. ಹುಡುಗರೆಲ್ಲರೂ ತುಂಬಾ...

TIME FOR CHANGE

                                                                           Education is a part of our life. It is something which gives us a perfect shape for life. Education is not something which makes you earn money or makes you conquer whole world. It is initially a process of gaining knowledge and then letting ourselves to a stream of knowledge in which we have interest. But currently education is transforming into a money machine which gives loads & loads of money. Oops!! I’m sorry, it is machine which mints money from people. Let us keep those things aside. Education is not about studying all time, attending each & every classes, then swallowing all the information and finally vomiting out it in exams . Then why the hell these educational institutions are required. ...