Skip to main content

ನೆನಪಿನಂಗಳ

   




        ದುಗರೇ, ನಾನು ಚಿಕ್ಕಮಗಳೂರಿನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಬಗ್ಗೆ ಮಾತಾಡಬೇಕೆಂಬುದು ಬಹು ಸಮಯದ ಇಚ್ಛೆ. ಸುತ್ತ ಮುತ್ತಲೂ ಎಲ್ಲೆಲ್ಲೂ ಹಸಿರು , ಗುಡ್ಡ ಬೆಟ್ಟಗಳ ಮಧ್ಯೆ ಇರುವ ಚಿಕ್ಕಮಗಳೂರು ಮಲೆನಾಡಿನ ಹೃದಯ ಎಂದೇ ಹೇಳಬಹುದು. ಇಂತಹ ವಾತಾವರಣದ ಮಧ್ಯೆ ಇರುವ ನಮ್ಮ ವಿದ್ಯಾರ್ಥಿ ನಿಲಯ ನಿಜಕ್ಕೂ ಅಧ್ಭುತ ಎಂದೇ ಹೇಳಬಹುದು.

       ಈ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಂದಾಗಿ ಈ ನಿಲಯ ಅಧ್ಭುತ ಎನ್ನಬಹುದು. ಚಿಕ್ಕಮಗಳೂರಿನಲ್ಲಿ ನನಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಮೊದಲ ಬಾರಿಗೆ ನಾನು ಚಿಕ್ಕಮಗಳೂರಿಗೆ ಬಂದಾಗ ವಸತಿಯ ಬಗೆಗೆ ತಲೆಕೆಡಿಸಿಕೊಂಡಿದ್ದೆ. ನಮ್ಮ ಕಾಲೇಜಿನಲ್ಲಿ  ವಿದ್ಯಾರ್ಥಿ ನಿಲಯದಲ್ಲಿ ರೂಮ್ ಕೇಳಿದಾಗ, "ನೀವು ಬ್ರಾಹ್ಮಣರಲ್ವಾ, ನೀವು ಕಾಲೇಜಿನಿಂದ ಹೀಗೆ ಎದುರಿನ ರಸ್ತೆಯಲ್ಲಿ ಹೋದರೆ ನಿಮಗಾಗಿ, ನಿಮ್ಮ ಸಮುದಾಯದವರಿಗಾಗಿ ಕಟ್ಟಿಸಿದ ವಿದ್ಯಾರ್ಥಿ ನಿಲಯ ಇದೆ" ಅಂತ ಹೇಳಿ, ಅಲ್ಲಿಗೆ ಕಳುಹಿಸಿದರು. 

       ವಿದ್ಯಾರ್ಥಿ ನಿಲಯದ ವಾತಾವರಣ ತುಂಬಾ ಚೆನ್ನಾಗಿತ್ತು. ಸುತ್ತಲೂ ಕಟ್ಟಡ, ಮಧ್ಯದಲ್ಲಿ ಬಗೆ ಬಗೆಯ ಹೂವುಳ್ಳ ಗಿಡಗಳು ಮತ್ತು ಶೃಂಗೇರಿ ಸ್ವಾಮಿಗಳು ಸ್ಥಾಪಿಸಿದ ವಿದ್ಯಾ ಗಣಪತಿಯ ಗುಡಿ. ಹುಡುಗರೆಲ್ಲರೂ ತುಂಬಾ ಉತ್ಸಾಹದಿಂದ ಓಡಾಡುತ್ತಿದ್ದರು. ವಸತಿಯ ಬಗ್ಗೆ ವಿಚಾರಿಸಿ ಅದೇ ವಿದ್ಯಾರ್ಥಿ ನಿಲಯಕ್ಕೆ ಸೇರಿಕೊಂಡೆ. ತಿಂಗಳಿಗೆ ಒಮ್ಮೆ ಬ್ರಾಹ್ಮಣ ಮಹಾ ಸಭೆಗೆ ಅವರು ನಿಗದಿ ಪಡಿಸಿದ ಹಣವನ್ನು ಕಟ್ಟಬೇಕಿತ್ತು. ಊಟ ಮತ್ತು ಇತರೆ ಅಗತ್ಯಗಳನ್ನು ಅಲ್ಲಿಯ ಅಂತಿಮ ವರ್ಷದ ವಿದ್ಯಾರ್ಥಿಗಳೇ ನೋಡಿಕೊಳ್ಳುತ್ತಿದ್ದರು. ವಿದ್ಯಾರ್ಥಿ ನಿಲಯದ ಆಗು ಹೋಗುಗಳನ್ನು ಹುಡುಗರೇ ನೋಡಿಕೊಳ್ಳುತ್ತಿದ್ದರಿಂದ ನಮ್ಮೆಲ್ಲರಿಗೆ ಜವಾಬ್ದಾರಿ ಏನೆಂಬುದು ಅರ್ಥವಾಯಿತು. ಭಟ್ರು ಮಾಡಿದ ಪಾಯಸ ಮತ್ತು ಸಿಹಿ ತಿನಿಸುಗಳನ್ನು ಮೆಚ್ಚದೇ ಇರುವ ವಿದ್ಯಾರ್ಥಿಯೇ ಇಲ್ಲ. 😅

       ಮೊದಲನೇ ವರ್ಷದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ಸ್ವಲ್ಪ ಕೆಲಸಗಳನ್ನು ಮಾಡಬೇಕಿತ್ತು. ನೀರು ಬಿಸಿ ಮಾಡಲು ಒಲೆಗೆ ಉರಿ ಹಾಕುವುದರಿಂದ ಹಿಡಿದು ಸಾಂಬಾರ್ ಪುಡಿ ಮಾಡಿಸುವವರೆಗೂ ನಮ್ಮದೇ ಕೆಲಸ. ಸೀನಿಯರ್ಸ್ ಗೆ  ಗೌರವದಿಂದ ಅಣ್ಣ ಅಂತ ಹೇಳಬೇಕಿತ್ತು. ಅವರು ಹೇಳಿದ ಕೆಲಸ ಮಾಡದೆ ಅವರಿಂದ ಬೈಸ್ಕೊಳೋದ್ರಲ್ಲಿ ಏನೋ ಸುಖ ಇತ್ತು. ಮೊದಲನೇ ವರ್ಷ, ನಮ್ಮಲ್ಲಿ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್ ಟಾಪ್ ಏನು ಇರಲಿಲ್ಲ. ಆದ್ದರಿಂದ  ಎಲ್ಲರು ಒಟ್ಟಿಗೆ ಸೇರಿ ಮಾತನಾಡುತ್ತಿದ್ದೆವು. ವರ್ಷ ಕಳೆಯುತ್ತಿದ್ದಂತೆ ಇಂತಹ ಸಮಯವನ್ನೆಲ್ಲ ಯಂತ್ರೋಪಕರಣಗಳು ಕಸಿದುಬಿಟ್ಟವು.

      ನಮ್ಮ ವಿದ್ಯಾರ್ಥಿನಿಲಯದ ವಿಶೇಷ ಏನೆಂದರೆ ಜೂನಿಯರ್ಸ್ ಸೀನಿಯರ್ಸ್ ಎಂಬ ಬೇಧ ಭಾವ ಇಲ್ಲದೆ ಎಲ್ಲರೂ ಒಟ್ಟಿಗೆ ಇರ್ತಿದ್ವಿ. ಪ್ರತೀ ಸಂಕಷ್ಟಿಯ ದಿನ ಭಜನೆ ಮಾಡ್ತಿದ್ವಿ. ಫೇರ್ವೆಲ್ ಮತ್ತು ಗಣಹೋಮವನ್ನು ನಮ್ಮ ಹಾಸ್ಟೆಲ್ನಲ್ಲಿ ತುಂಬಾ ಚೆನ್ನಾಗಿ ನಡೆಸುತ್ತಾರೆ. ಫೇರ್ವೆಲ್ ದಿನ ಜೂನಿಯರ್ಸ್ಗಳಿಗೆ  ಸೀನಿಯರ್ಸ್ ಆಗ್ತಿದೀವಿ ಅಂತ ಖುಷಿ ಒಂದು ಕಡೆ ಆದರೆ, ಅಂತಿಮ ವರ್ಷದ ಸೀನಿಯರ್ಸ್ಗಳಿಗೆ ಹಾಸ್ಟೆಲ್ ಅನ್ನು ಕೆಲವೇ ದಿನಗಳಲ್ಲಿ ಬಿಡಬೇಕಲ್ವಾ ಅಂತ ದುಃಖ ಇನ್ನೊಂದು ಕಡೆ.

     ಪ್ರತಿ ವರ್ಷವೂ ಅಂತಿಮ ವರ್ಷದ ವಿದ್ಯಾರ್ಥಿಗಳ ಕಡೆಯಿಂದ ಗಣಹೋಮ ನಡೆಸುತ್ತೇವೆ. ಆ ದಿನ ಹಾಸ್ಟೆಲ್ ಬಿಟ್ಟು ಹೋದ ಎಷ್ಟೋ ಹುಡುಗರು [ ಸೂಪರ್ ಸೀನಿಯರ್ಸ್ ] ಮತ್ತೆ ಸೇರುತ್ತಾರೆ. ನಮಗೆ ಅವರ ಪರಿಚಯವೂ ಆಗುತ್ತದೆ. ಈ ರೀತಿಯಲ್ಲಿ ಗೆಳೆತನದ ಬಾಂಧವ್ಯ ಬೆಳೆಯುತ್ತದೆ. ಇನ್ನೊಂದು ವಿಶೇಷ ವಿಷಯವೇನೆಂದರೆ ಕಳ್ಳತನ ಎಂಬುದು ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಇಲ್ಲ. ಕಳ್ಳತನ ಆಗಿದ್ದು ನಮ್ಮ ಹಾಸ್ಟೆಲ್ ಇತಿಹಾಸದಲ್ಲೇ ಇಲ್ಲ.

     ಹಾಸ್ಟೆಲ್ ಅಲ್ಲಿ ಇರೋ ಎಲ್ಲಾ ವಿದ್ಯಾರ್ಥಿಗಳಿಗೆ ರಮೇಶಣ್ಣ ಎಂಬುವರು ದೇವರು ಇದ್ದಂತೆ. ಅವರು ಹಾಸ್ಟೆಲ್ ಪಕ್ಕಕ್ಕೆ ಒಂದು ಕ್ಯಾಂಟೀನ್ ಮತ್ತು ಸಣ್ಣ ಅಂಗಡಿ ನಡೆಸುತ್ತಾರೆ. ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಅವರಿಗೆ ಅಪಾರ ಅಭಿಮಾನ ಮತ್ತು ನಂಬಿಕೆ. ಅವರಿಗೆ ನಮ್ಮಲ್ಲಿರುವ ಗಣಪತಿಯ ಮೇಲೆ ತುಂಬಾ ನಂಬಿಕೆ. ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಮ್ಮ ಅಂಗಡಿಯಲ್ಲಿ ಅಕೌಂಟ್ ಕೂಡ ಕೊಡುತ್ತಾರೆ. ಏನು ಬೇಕಾದರೂ ಯಾವಾ ಸಮಯದಲ್ಲಾದರೂ ಖರೀದಿ ಮಾಡಬಹುದು. ಹಣವನ್ನು ತಿಂಗಳಿಗೊಮ್ಮೆ ಪಾವತಿಸಿದರೆ ಸಾಕು. ನಾವು ಹಣವನ್ನು ಕೊಡಲು ಆಗದಿದ್ದರೂ, ಅವರೇ ಬಾಯಿ ಬಿಟ್ಟು ಯಾವತ್ತೂ ಕೇಳಲ್ಲ. ಅಂತಹ ನಂಬಿಕೆ ನಮ್ಮ ಮೇಲೆ ಅವರಿಗೆ ಇತ್ತು ಮತ್ತು ಈಗಲೂ ಇದೆ. ಕಷ್ಟ ಕಾಲದಲ್ಲಿ ಸಹಾಯ ಮಾಡಲು ರಮೇಶಣ್ಣ ಸದಾ ಸಿಧ್ಧರಿರುತ್ತಾರೆ.

    ಹಾಸ್ಟೆಲ್ನಲ್ಲಿ ಎಲ್ಲರು ಸೇರಿ ಕ್ರಿಕೆಟ್ ಆಡುತ್ತಿದ್ದೆವು. ಚೆಸ್ , ಕ್ಯಾರಂನ೦ತಹ ಒಳಾಂಗಣ ಆಟವು ಆಡುತ್ತಿದ್ದೆವು. ನಮ್ಮ ವಿದ್ಯಾರ್ಥಿ ನಿಲಯವು ಎಷ್ಟು ಚೆನ್ನಾಗಿತ್ತು ಎಂದರೆ ಅದರ ಶ್ರೇಯಸ್ಸು ಅಲ್ಲಿನ ವಿದ್ಯಾರ್ಥಿಗಳಿಗೆ ಸೇರಬೇಕು. ಏಕೆಂದರೆ ಬ್ರಾಹ್ಮಣ ಮಹಾ ಸಭೆಯವರು ತಿಂಗಳಿಗೆ ಸರಿಯಾಗಿ ಹಣವನ್ನು ವಸೂಲಿ ಮಾಡುತ್ತಿದ್ದರು ಬಿಟ್ಟರೆ ಯಾವ ರೀತಿಯಿ೦ದಲೂ ಸಹಾಯ ಮಾಡುತ್ತಿರಲಿಲ್ಲ. ಬ್ರಾಹ್ಮಣ ಮಹಾ ಸಭೆಯಿಂದ ಸಹಾಯಕ್ಕಿಂತ ತೊಂದರೆಯೇ ಜಾಸ್ತಿಯಾಗಿತ್ತು.
ಇದೆಲ್ಲದರ ನಡುವೆ ವಿದ್ಯಾರ್ಥಿ ನಿಲಯದ ಎಲ್ಲಾ ಆಗು ಹೋಗುಗಳನ್ನು ಹುಡುಗರೇ ನೋಡಿಕೊಳ್ಳುತ್ತಿದ್ದರು.

     ನಮ್ಮ ಹಾಸ್ಟೆಲಿನಲ್ಲಿ ಮಾತನಾಡುವುದರಲ್ಲಿ, ಆಟವಾಡುವುದರಲ್ಲಿ ಕಳೆದ ಸಮಯಗಳ ಸಿಹಿ  ನೆನಪಿನ  ಜೊತೆ ಮನೆಗೆ ಹಿಂದುರುಗುವಾಗ ಕಣ್ಣಂಚಿನಲ್ಲಿ ನೀರಿಳಿಯಿತು. ಮೊನ್ನೆ ತಾನೇ ಎಲ್ಲಾ ನಡೆದದ್ದು ಎಂಬಂತೆ ಈ ಎಲ್ಲಾ ನೆನಪುಗಳು ಕಣ್ಣ ಮುಂದೆಯೇ ಹಾದು ಹೋಗುತ್ತದೆ. ಹೀಗೆ ಬ್ರಾಹ್ಮಣ ವಿದ್ಯಾರ್ಥಿ ನಿಲಯವು ನನಗೆ ಎರಡನೇ ಮನೆಯಾಗಿತ್ತು.

"ಬ್ರಾಹ್ಮಿನ್ಸ್ ಹಾಸ್ಟೆಲ್ ಗಣಪತೀ ಕೀ.... ಜೈ" 

Comments

  1. ತುಂಬಾ ಚೆನ್ನಗೆದೆ .......ನಂಗ್ ಇಷ್ಟ ಅಯ್ತು ಯಾಕ್ ಅಂದ್ರೆ ಹಾಸ್ಟೆಲ್ ಲೈಫ್ ಹೇಗ್ ಇರುತ್ತೆ ಅಂತ ನೇ ಗೊತ್ತ ನಂಗೆ

    ReplyDelete
  2. Super sumanth...you remembered my hostel days... nice writing

    ReplyDelete
    Replies
    1. Thank you...
      You too made my hostel day quite remembering... Thank you for that too :)

      Delete
  3. ಸವಿನೆನಪು ಸದಾ ನಿಮ್ಮೊಂದಿಗೆ ಇರಲಿ

    ReplyDelete
  4. Kannadalli type maadodu swalpa kashta ... Adru helthini ... even though I haven't experienced being in hostel ...neen dina nan hatra heltidd yella moments nange


    alle idde annoshtu kushi kodtittu. Alle idde anno bhavane nange ide andre ennu yeshtu sambrama
    a vatavarana dalli ide ... I know how much you are attached to them ... Let the memories and happiness stay forever 😊 life time experience ...!

    ReplyDelete
  5. ಸವಿನೆನಪುಗಳನ್ನು ಸುಂದರವಾಗಿ ಬರೆದಿದ್ದೀರಿ. ☺

    ReplyDelete
  6. ಮರೀಬೇಕೆಂದ್ರು ಮರೆಯಲಾರದ ದಿನಗಳು!!😊
    ಚೆನ್ನಾಗಿದೆ ಸುಮಂತ್😊🤘

    ReplyDelete
  7. Nija... Neevella aa dinagalannu, savi nenpaagi maadidakke dhanyavadagalu.....!!

    ReplyDelete

Post a Comment

Popular posts from this blog

ಗಾವೋ ವಿಶ್ವಸ್ಯ ಮಾತರಃ

        ಗಾವೋ ವಿಶ್ವಸ್ಯ ಮಾತರಃ ಎಂದರೆ ಈ ಜಗತ್ತಿಗೆ ಗೋವು ತಾಯಿ ಇದ್ದಂತೆ. ಸರಳ, ಮೂಕ ಮತ್ತು ಉಪಯುಕ್ತ ವಾದ ಜೀವಿ. ನಾವು ಎಷ್ಟು ಪ್ರೀತಿ ತೋರಿಸ್ತಿವೋ ಅದಕ್ಕೆ ಮೀರಿದ ಪ್ರೀತಿ ನಮಗೆ  ಕೊಡುತ್ತದೆ. ಅದರ ಹಾಲು ಎಷ್ಟು ಪ್ರಯೋಜನಕಾರಿ ಎಂದರೆ ಅದಿಲ್ಲದೆ ನಮ್ಮ ದಿನನಿತ್ಯ ಆಹಾರ ಪದ್ಧತಿ ಸಂಪೂರ್ಣವಾಗುವುದಿಲ್ಲ.   ನಾವು ತಿನ್ನುವ ಎಷ್ಟೋ ಸಿಹಿ ಪದಾರ್ಥಗಳು ಹಾಲಿಲ್ಲದೆ ತಯಾರಾಗುವುದಿಲ್ಲ. ಆದರೆ ಈ ಹಾಲನ್ನು ಉತ್ಪಾದನೆ ಮಾಡುವ ಡೈರಿ ಫಾರ್ಮ ಗಳ ಸಂಕಷ್ಟ ಯಾರಿಗೂ ತಿಳಿದಿಲ್ಲ . ಅವರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದರಲ್ಲಿ ಕಲಬರಿಕೆ ಮಾಡದೆ ಇದ್ದರೆ ಅವರಿಗೂ ಉಳಿಗಾಲವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.       ಮೊನ್ನೆ ತಾನೆ ಸಾಗರದ ಸಮೀಪದಲ್ಲಿರುವ ಒಂದು ಡೈರಿ ಫಾರ್ಮ್ ಗೆ ಭೇಟಿ ನೀಡಿದೆ. ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಬಿಚ್ಚಿಟ್ಟರು. ಅಲ್ಲಿ ಅಂದಾಜು 300 ದನಗಳು ಇದ್ದವು. ಸುಮಾರಷ್ಟು ಹೈಬ್ರಿಡ್ ತಳಿಗಳು. ಉಳಿದವು ಮಲ್ನಾಡ್ ಗಿಡ್ಡ. ಅವರಿಗೆ ಅಂದಾಜು 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದಿನಕ್ಕೆ ಒಂದು ದನದ ಮೇಲೆ ಅವರಿಗೆ 200 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. 300 ದನಕ್ಕೆ  ಅಂದಾಜು 60,000 ರೂಪಾಯಿಗಳು. ಪ್ರತಿ ಲೀಟರ್ ಗು ಅಬ್ಬಬ್ಬಾ ಅಂದರೆ 40 ರೂಪಾಯಿಗಳು ಎಂದು ಭಾವಿಸೋಣ. ಹಂಗಾದ್ರೆ ಅವರಿಗೆ ಬರೋದು  24000 ರೂಪಾಯಿಗಳು. ಇಲ್ಲೇ ಅವರಿಗೆ ಎಷ್ಟು ನಷ್ಟ ಆಗ್ತಿದೆ ಅಂತ ತಿಳಿಯಬಹುದು.

CA$H-less!

We are in digital age, where most of the daily task are carried out by 0's and 1's. Even cell phones have been evolved into smart phones from past decade. The smartness of these cell phones helped us to step into digital age.  I remember when these UPI transaction was not in the picture, we used to visit nearest ATM to withdraw cash and then rush into some general stores to get change. It was very difficult to get smaller denominations for shopkeepers, when some one gave ₹500 for small tea. Especially, shopkeepers used to give chocolates for the remaining smaller amount of money.  If ATM runs out of money, then we are doomed. Oh Gosh! Now we can't even think life without UPI transaction. Somehow we can say that these kind of small problems has been solved using UPI transaction or digital transaction. I totally agree with this and was thinking in the same way. Ah! This is our mindset. To be honest, I only realized when I started spending my salary. This U

Stop COVIDIOTS and don't be one

Hi readers, it's been an year, since I haven't posted on blog. I know COVID times was extremely difficult for most of the people. Most of 'Work from Home' professionals were among the blessed ones to continue their job with less difficulty. Other dependent businesses were badly affected. People living in semi urban or rural areas were less likely to notice COVID cases compared to metro or urban areas. The first wave of COVID 19 had affected badly and we can see what toll the economy had to pay. Even after creating awareness by respective health board ( I know the fact that everyone hates the way they spread awareness before every phone call ), some people just blindly ignored the consequences and still doesn't follow the rules. Wearing a mask & maintaining social distance is a very basic thing that even an illiterate can understand. But some educated people still continue to spread fake news through social media forwards by mentioning "The vaccine may kill