ಗಾವೋ ವಿಶ್ವಸ್ಯ ಮಾತರಃ ಎಂದರೆ ಈ ಜಗತ್ತಿಗೆ ಗೋವು ತಾಯಿ ಇದ್ದಂತೆ. ಸರಳ, ಮೂಕ ಮತ್ತು ಉಪಯುಕ್ತ ವಾದ ಜೀವಿ. ನಾವು ಎಷ್ಟು ಪ್ರೀತಿ ತೋರಿಸ್ತಿವೋ ಅದಕ್ಕೆ ಮೀರಿದ ಪ್ರೀತಿ ನಮಗೆ ಕೊಡುತ್ತದೆ. ಅದರ ಹಾಲು ಎಷ್ಟು ಪ್ರಯೋಜನಕಾರಿ ಎಂದರೆ ಅದಿಲ್ಲದೆ ನಮ್ಮ ದಿನನಿತ್ಯ ಆಹಾರ ಪದ್ಧತಿ ಸಂಪೂರ್ಣವಾಗುವುದಿಲ್ಲ. ನಾವು ತಿನ್ನುವ ಎಷ್ಟೋ ಸಿಹಿ ಪದಾರ್ಥಗಳು ಹಾಲಿಲ್ಲದೆ ತಯಾರಾಗುವುದಿಲ್ಲ. ಆದರೆ ಈ ಹಾಲನ್ನು ಉತ್ಪಾದನೆ ಮಾಡುವ ಡೈರಿ ಫಾರ್ಮ ಗಳ ಸಂಕಷ್ಟ ಯಾರಿಗೂ ತಿಳಿದಿಲ್ಲ . ಅವರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದರಲ್ಲಿ ಕಲಬರಿಕೆ ಮಾಡದೆ ಇದ್ದರೆ ಅವರಿಗೂ ಉಳಿಗಾಲವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೊನ್ನೆ ತಾನೆ ಸಾಗರದ ಸಮೀಪದಲ್ಲಿರುವ ಒಂದು ಡೈರಿ ಫಾರ್ಮ್ ಗೆ ಭೇಟಿ ನೀಡಿದೆ. ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಬಿಚ್ಚಿಟ್ಟರು. ಅಲ್ಲಿ ಅಂದಾಜು 300 ದನಗಳು ಇದ್ದವು. ಸುಮಾರಷ್ಟು ಹೈಬ್ರಿಡ್ ತಳಿಗಳು. ಉಳಿದವು ಮಲ್ನಾಡ್ ಗಿಡ್ಡ. ಅವರಿಗೆ ಅಂದಾಜು 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದಿನಕ್ಕೆ ಒಂದು ದನದ ಮೇಲೆ ಅವರಿಗೆ 200 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. 300 ದನಕ್ಕೆ ಅಂದಾಜು 60,000 ರೂಪಾಯಿಗಳು. ಪ್ರತಿ ಲೀಟರ್ ಗು ಅಬ್ಬಬ್ಬಾ ಅಂದರೆ 40 ರೂಪಾಯಿಗಳು ಎಂದು ಭಾವಿಸೋಣ. ಹಂಗಾದ್ರೆ ಅವರಿಗೆ ಬರೋದು 24000 ರ...
As the name suggest, it's all about my thinking !!!