Skip to main content

Posts

Showing posts from August, 2018

ಮರುಭೂಮಿಯ ಅಮೃತ

    ಮ ರುಭೂಮಿಯಲ್ಲಿ ನೀರು ಸಿಕ್ಕಿದರೆ ಅಮೃತ ಸಿಕ್ಕಿದಂತೆ. ಇದೇ ಅನುಭವ ನನಗಾಯಿತು. ಒಳ್ಳೆಯ ಸಿನಿಮಾಗಳೇ ಇಲ್ಲದೇ ಮರುಭೂಮಿಯಂತೆ ಇದ್ದ ಸಿನೆಮಾ ಕ್ಷೇತ್ರದಲ್ಲಿ " ಒಂದಲ್ಲಾ ಎರಡಲ್ಲಾ " ನೀರಿದ್ದಂತೆ. ಈ ಸಿನೆಮಾ ಎಂಬ ಮರುಭೂಮಿಯಲ್ಲಿ ಕೆಲವು ನೀರಿರುವ ಒಯಾಸಿಸ್ ನಂತೆ ಒಳ್ಳೆಯ ಚಿತ್ರಗಳು ತುಂಬಾ ಕಡಿಮೆ. ಆದರೆ ಒಂದು ಒಯಾಸಿಸ್ ನಿಂದ ಇನ್ನೊಂದಕ್ಕೆ ಹಾನಿ ಕೂಡ ಆಗಬಾರದು. ಅವೆಲ್ಲ ವಿಷಯ ಪಕ್ಕಕೆ ಇಟ್ಟು... ಈ ಸಿನೆಮಾ ಬಗೆಗೆ ಒಂದೆರಡು ಮಾತಾಡೋಣ.     ಇವತ್ತು ಈ ಚಿತ್ರವನ್ನು ನೋಡಿ ಚಿತ್ರಮಂದಿರದಿಂದ ಹೊರ ಬರುವಾಗ ಎಷ್ಟೋ ವರುಷಗಳ ನಂತರ ಸಿನೆಮಾ ನೋಡಿದ ಖುಷಿ ಸಿಕ್ಕಿತು. ಮಗುವಿನ ಮುಗ್ಧತೆಯ ಸುತ್ತ ಎಷ್ಟು ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರೆ ನಾವು ಕೂಡ ಸಮೀರನಂತೆ ಮಗುವಾಗಿಬಿಡುತ್ತೇವೆ. ಹೇಗೆ ಸಿನೆಮಾದಲ್ಲಿ ಕರು ಮತ್ತು ಹುಲಿ ನಡುವೆ ಸ್ನೇಹ ಹುಟ್ಟುತ್ತದೆಯೋ.. ಹಾಗೆಯೇ ಸಮಾಜದಲ್ಲಿ ಎಲ್ಲಾ ಪಂಗಡದವರು ಒಂದಾದರೆ ಮಗುವಿನಂತೆ ಮುಗ್ಧತೆಯ ಜೀವನವನ್ನು ನಡೆಸಬಹುದು.    ಆಹಾ!!! ಆ ಕಥೆಗೆ ತಕ್ಕ ಹಾಡುಗಳು, ಹಾಸ್ಯ ಸನ್ನಿವೇಶಗಳು... ವಾಹ್!! ಈ ಚಿತ್ರವನ್ನು ಮಾಡಿದ ಜನರ ಶ್ರಮ "ಒಂದಲ್ಲಾ ಎರಡಲ್ಲಾ"... ಮಾಡಿದವರು ಒಬ್ಬರಲ್ಲಾ ಇಬ್ಬರಲ್ಲಾ ಹಲವಾರು.... ಇವರಿಗೆಲ್ಲಾ ಇಂತಹ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು....    ಎಲ್ರಿಗೂ ನಾನು ಹೇಳುವುದಿಷ್ಟೇ.... "ನಿಮ್ಮಲ್ಲಿ ಮಗುವಿನ ಮ

ಅಂಬಾ...ಅಂಬಾ....!

ಓ ದುಗರೇ ಮಲೆನಾಡಿನಲ್ಲಿ ಏನ್ ಮಳೆ ಗೊತ್ತಾ, ಮನೆಯಿಂದ ಹೊರಗೆ ಕಾಲಿಡಲು ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ನಗರ ಪ್ರದೇಶದಲ್ಲಿಯೇ ಈ ಸ್ತಿತಿ ಆದರೆ ಇನ್ನು ಮಲೆನಾಡಿನ ಹಳ್ಳಿಯ ಪರಿಸ್ಥಿತಿ ಕೇಳಲೇಬೇಡಿ.  ಇಂಜಿನಿಯರಿಂಗ್ ಮುಗಿದರೂ ಕೆಲಸಕ್ಕೆ ಕರೆಯಲಿಲ್ಲ ಎಂದರೆ ತುಂಬಾ ಹಿಂಸೆ ಆಗುತ್ತೆ. ಮನೇಲೆ ಸುಮ್ಮನಿರಲು ಆಗುವುದಿಲ್ಲ. ಹೀಗೆ ಒಂದು ತಿಂಗಳು ಕಳೆದರೂ, ಮುಂಜಾನೆ ಬೇಗ ಏಳುವುದು ರೂಢಿಯಾಗಲಿಲ್ಲ. ಇವತ್ತು ನಾಗರಪಂಚಮಿ ಹಬ್ಬ ಬೇರೆ, ಮುಂಜಾನೆ ಬೇಗ ಏಳಲೇ ಬೇಕು. ಅದಿರಲಿ, ನಿಮಗೆಲ್ಲಾ ನೆನಪಿದೆಯೇ,..? ಸ್ವಾತಂತ್ರ ದಿನಾಚರಣೆಯ ದಿನ ಶಾಲೆಗೆ ಹೋಗಿ ಧ್ವಜಾರೋಹಣವನ್ನು ಮುಗಿಸಿ, ಸಿಹಿ ತಿಂದು ಮನೆಗೆ ತೆರಳುತ್ತಿದ್ದೆವು. ಆದರೆ ಏನ್ ಮಾಡ್ಲಿ ಮಾರಾಯರೆ, ನೆನ್ನೆ ರಾತ್ರಿ PUBG ಆಡ್ತಾ ಇದ್ದರಿಂದ ಬೆಳಿಗ್ಗೆ ಬೇಗ ಏಳಲು ಆಗಲಿಲ್ಲ.       ನಮ್ಮ ಮನೆಯ ಎದುರಿಗೆ ಇರುವ ಫ್ಯಾಕ್ಟರಿ ಜಾಗದಲ್ಲಿ ತಡ ರಾತ್ರಿ ದನವೊಂದು ಕರು ಹಾಕಿತು. ಇದೇ ಇವತ್ತಿನ ವಿಶೇಷ. ಇವತ್ತು ಹಬ್ಬ ಆದ್ದರಿಂದ ಎಲ್ಲರೂ ದನಗಳಿಗೆ ಏನಾದರೂ ತಿನ್ನಲು ತಂದಿದ್ದರು. ಆ ಕರು ನೋಡಲು ತುಂಬಾ ಚೆನ್ನಾಗಿತ್ತು. ವಿಶೇಷವೆಂದರೆ ಅಲ್ಲಿ ಅಕ್ಕ ಪಕ್ಕ ಇದ್ದ ದನಗಳು ಅದನ್ನು ನಾಯಿಗಳಿಂದ ರಕ್ಷಿಸುತ್ತಿದ್ದವು. ಹೀಗೆ ಮಧ್ಯಾಹ್ನದ ವೇಳೆಗೆ "ಅಂಬಾ...ಅಂಬಾ" ಅನ್ನೋ ಶಬ್ದ ಕ್ಷೀಣಿಸಿತು. ಹೊರಗೆ ಬಂದು ನೋಡಿದರೆ ಯಾವ ದನಗಳೂ ಇಲ್ಲ. ಆ ಕರು ಇವತ್ತೇ ಎದ್ದು ಸ್ವತಂತ್ರವಾಗಿ ಓಡಾಡಲು