ಅ ದೊಂದು ಕಾಲವಿತ್ತು, ಮುಂಜಾನೆ ಎದ್ದು ಹೊರಗೆ ಹೋದರೆ ಗುಬ್ಬಚ್ಚಿಯ ಚಿಲಿಪಿಲಿ ಕಲರವವನ್ನು ಕೇಳುತ್ತಿದ್ದೆವು. ಸಂಜೆಯಾದರೆ, ಗುಬ್ಬಚ್ಚಿ ಮರಳಿ ಗೂಡಿಗೆ ಸೇರುವುದನ್ನು ಕೂಡ ನೋಡಬಹುದಿತ್ತು. ಅವು ತಮ್ಮ ಲೋಕದಲ್ಲೇ ಹಾರಾಡುತ್ತ ಕುಣಿಯುತ್ತ ಸಂತೋಷದಿಂದ ಇದ್ದವು. ಅವುಗಳ ಸಂತೋಷವೇ ನಮ್ಮ ಸಂತೋಷವಾಗಿತ್ತು. ಪರಿಸರವನ್ನು ನೋಡಿ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ! ಅದರ ಜೊತೆಗೆ ಹಕ್ಕಿಗಳ ಕಲರವವೂ ಸೇರಿದರೆ ಮತ್ತಷ್ಟು ಖುಷಿ. ಅದಕ್ಕೆ ವಿಶಾಲವಾದ ಜಾಗ ಬೇಡ, ಒಂದು ಸಣ್ಣ ಮರವಿದ್ದರೆ ಸಾಕು, ಗುಬ್ಬಚಿಯೂ ಖುಷಿ ಖುಷಿಯಾಗಿ ಇರುತ್ತವೆ. ಹಾಗೆ ನೋಡಿದರೆ ಈ ಬುದ್ಧಿ ಜೀವಿಗಳ ಆಸೆಯಿಂದಾಗಿ ಇವರ ಪುಟ್ಟ ಪರಿವಾರಕ್ಕೆ ಧಕ್ಕೆ ಉಂಟಾಯಿತು ಎಂದರೆ ತಪ್ಪಲ್ಲ. ಮನುಷ್ಯರು ಚಿನ್ನ, ಆಸ್ತಿ ವಿಚಾರಕ್ಕೆ ಅದೆಷ್ಟು ಕಿತ್ತಾಡುತ್ತಾರೆ. ಆಸ್ತಿಯ ವಿಚಾರದಲ್ಲಂತೂ ಅವರಿಗೆ ಸಂಬಂಧಗಳ ಮಹತ್ವವೇ ತಿಳಿಯುವುದಿಲ್ಲ. ಸ್ವಂತ ಪೋಷಕರನ್ನೇ ಮನೆಯಿಂದ ಹೊರ ಹಾಕುವ ಮಕ್ಕಳಿರುವಾಗ, ಈ ಬುದ್ಧಿ ಜೀವಿಗಳಿಗೆ ನಿಜಕ್ಕೂ ಬುದ್ಧಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅದೆಲ್ಲ ಇರಲಿ, ಇಂತಹ ಯಾವುದೇ ಜಂಜಾಟವಿಲ್ಲದ ಬದುಕನ್ನು ನಡೆಸುತ್ತಿರುವ ಗುಬ್ಬಚಿಯ ವಿಚಾರದ್ಲಲ್ಲಿ ಮನುಷ್ಯನು ಘೋರ ತಪ್ಪನ್ನು ಮಾಡುತ್ತಿದ್ದಾನೆ. ಇದಕ್ಕೆ ಈ ಬ್ಲಾಗಿನ ಜೊತೆ ಹಾಕಿರ...
As the name suggest, it's all about my thinking !!!