ಕನ್ನಡ ಕನ್ನಡ ಕನ್ನಡ !!! ಈ ಪದ ಕೇಳಿದ್ರೆ ಸಾಕು ಮೈ ರೋಮಾಂಚನ !! ಕನ್ನಡ ಅನ್ನೋದು ಭಾಷೆ ಅಲ್ಲ ಅದು ನಮ್ಮಲ್ಲಿರೋ ಸಂಸ್ಕೃತಿ . ಇತ್ತೀಚಿನ ದಿನಗಳಲ್ಲಿ , ದಿನ ನಿತ್ಯ ಮಾತಲ್ಲಿ ಕನ್ನಡ ಬಳಕೆ ಬಹಳ ವಿರಳ. ಎಲ್ಲ ಅಪ್ಪ ಅಮ್ಮoದಿರಿಗೂ ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲಿ ಮಾತಾಡಬೇಕು. ಹಾಗೆ ಮಾತಾಡಿದರೆ ಅವರಲ್ಲಿ ಚಂದ್ರನನ್ನು ತಲುಪಿದ ಸಂತೋಷ ಉಂಟಾಗುತ್ತದೆ. ಬೆಂಗಳೂರಿನಲ್ಲoತು ಆಕಾಶವಾಣಿಯಲ್ಲಿ ಏನೇ ವಿಷಯ ಇರಲಿ ಕನ್ನಡಕ್ಕಿಂತ ಜಾಸ್ತಿ ಆಂಗ್ಲ ಭಾಷೆಯಲ್ಲೇ ಪ್ರಸಾರ ಆಗೋದು ಜಾಸ್ತಿ. ಇದರ ಮಧ್ಯೆ "ನಮ್ ರೇಡಿಯೋ" ಹೆಸರಿನ ಒಂದು ಆಕಾಶವಾಣಿ ಸಂಸ್ಥೆ ೨೪ ಗಂಟೆಗಳ ಕಾಲ ಕನ್ನಡವನ್ನೇ ಪ್ರಸಾರ ಮಾಡುತ್ತದೆ. ಕನ್ನಡ ಹಾಡುಗಳ ಮಧ್ಯೆ ಮನೋರಂಜನೆಯ ಮಾತುಗಳು ನಮ್ಮನ್ನು ಸದಾ ನಗಿಸುತ್ತಿರುತ್ತದೆ. ಇನ್ನು ಒಂದು ವಿಶೇಷ ಸಂಗತಿ ಏನೆಂದರೆ ಅಂತರ್ಜಾಲ ಸಂಪರ್ಕವಿದ್ದರೆ ಮಾತ್ರ ಕೇಳಲು ಸಾಧ್ಯ. ಇದನ್ನು ಬಳಸಲು ಗೂಗಲ್ ಪ್ಲೇಸ್ಟೋರ್ ಅಲ್ಲಿ "ನಮ್ ರೇಡಿಯೋ" ಅಪ್ಲೀಕೇಶನ್ ಡೌನ್ಲೋಡ್ ಮಾಡಬೇಕು. ಅಂತರ್ಜಾಲ ಸಂಪರ್ಕವಿದ್ದರೆ ಇದನ್ನು ಎಲ್ಲಾದರು ಕೇಳಬಹುದು. ಇದು 196 ದೇಶಗಳಿಗೆ ತಲುಪಿದೆ ಎನ್ನುವುದೇ ಹೆಮ್ಮೆಯ ವಿಚಾರ. ಇದು ಕನ್ನಡದ ಮೊದಲ ಡಿಜಿಟಲ್ ರೇಡಿಯೋ. ಸ್ವಲ್ಪ ದಿನದ ಹಿಂದೆ ಇವರ ತಂಡ ನಮ್ಮ ಕಾಲೇಜ್ ಗೆ ಭೇಟಿ ನೀಡಿ ನಮ್ಮ ಜೊತೆ ಮಾತಾಡಿದರು. ಇವರು ಮಾಡಿರುವ ಈ ರೇಡಿಯೋ ಸ್ಟೇಷನ್ ಕೇಳಿ ನಮಗೂ ಬಹಳ ಹೆಮ್ಮೆ ಆಯ್ತು. ಇದು ಕನ್ನಡ ಉಳ
As the name suggest, it's all about my thinking !!!